ಕ್ಷಮಿಸು ನೀ ನನ್ನನ್ನು
ಕ್ಷಮಿಸು ನೀ ನನ್ನನ್ನು...
ಅರಿವಾಗಿ ನಾ ಮಾಡಿದ ತಪ್ಪಿನ ಪರಿಣಾಮವನ್ನು
ಯೋಚಿಸಲಾರೆ ಅದರ ಬಗ್ಗೆ ಇನ್ನು
ಅರಿತೆ ನಿನ್ನ ಪ್ರೀತಿಯನ್ನು
ಕ್ಷಮಿಸು ನೀ ನನ್ನನ್ನು
ಕ್ಷಮಿಸು ನೀ ನನ್ನನ್ನು...
ನೋಯಿಸಲಾರೆ ಹೀಗೆ ಇನ್ನು
ಬದಿಗೊತ್ತಿ ನಿನ್ನ ಆ ಸಣ್ಣ ಕೋಪವನ್ನು
ಉಳಿಸುವೆಯಾ ಈ ಪ್ರೇಮವನ್ನು... ?
ಕ್ಷಮಿಸು ನೀ ನನ್ನನ್ನು
ಕ್ಷಮಿಸು ನೀ ನನ್ನನ್ನು...
--ವೀಕ್ಷಿತ್ ಕೆ